ಹುಬ್ಬಳ್ಳಿ: ಅಪರಿಚಿತ ವ್ಯಕ್ತಿಯೋರ್ವ ಬಿಲ್ಡಿಂಗ್ ಮೇಲಿಂದ ಬಿದ್ದು ಅನುಮಾನಾಸ್ಪದವಾಗಿ ಸಾವನಪ್ಪಿರುವ ಘಟನೆ ನಗರದ ಪ್ರೈಡ್ ಐಕಾನ್ ಕಟ್ಟಡದ ಪಾರ್ಕಿಂಗ್ ರಸ್ತೆಯಲ್ಲಿ ನಡದಿದೆ.
ಸೆಕ್ಯೂರಿಟಿ ಬಟ್ಟೆ ಧರಿಸಿರೋ ವ್ಯಕ್ತಿಯಾಗಿದ್ದು, ಬೆಳಗಿನ ಜಾವ ವ್ಯಕ್ತಿ ಬಿಲ್ಡಿಂಗ್ ಮೇಲಿಂದ ಬಿದ್ದ ಸಾವನಪ್ಪಿರುವ ಸಂಶಯ ವ್ಯಕ್ತವಾಗಿದೆ. ಇನ್ನೂ ಸಾವನಪ್ಪಿರುವ ವ್ಯಕ್ತಿಯ ಬಿಲ್ಡಿಂಗ್ ಯಾವುದೇ ಮಳುಗೆಯಲ್ಲೂ ಕೆಲಸ ಮಾಡಿದವನಲ್ಲ ಎಂದು ಕಟ್ಟಡದ ಸೆಕ್ಯೂರಿಟಿ ಮುಖ್ಯಸ್ಥರು ಮಾಹಿತಿ ನೀಡಿದ್ದಾರೆ.

ಕಟ್ಟಡದ ಮೇಲಿಂದ ಬಿದ್ದ ರಭಸಕ್ಕೆ ವ್ಯಕ್ತಿಯ ದೇಹದ ಮೂಳೆಗಳು ಮುರಿದು ಹೋಗಿದ್ದು, ಸ್ಥಳದಲ್ಲಿಯೇ ದಾರುಣವಾಗಿ ವ್ಯಕ್ತಿ ಸಾವನಪ್ಪಿದ್ದಾನೆ. ಸ್ಥಳೀಯರ ಮಾಹಿತಿ ಮೇರೆಗೆ ಘಟನಾ ಸ್ಥಳಕ್ಕೆ ಗೋಕುಲ್ ರೋಡ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಬಳಿಕ ಸ್ಥಳೀಯರ ಸಹಕಾರದೊಂದಿಗೆ ಮೃತದೇಹವನ್ನು ಕಿಮ್ಸ್ ಆಸ್ಪತ್ರೆಗೆ ರವಾನಿಸಿದ್ದಾರೆ.
ಇನ್ನೂ ವ್ಯಕ್ತಿ ಹೆಸರು ಸೇರಿದಂತೆ ಇನ್ನಿತರ ಮಾಹಿತಿಗಳು ಪೊಲೀಸರ ಪ್ರಾಥಮಿಕ ತನಿಖೆಯ ನಂತರವಷ್ಟೇ ತಿಳಿದು ಬರಬೇಕಾಗಿದೆ. ಈ ಕುರಿತು ಗೋಕುಲ್ ರೋಡ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.