ಹುಬ್ಬಳ್ಳಿ: ಗೃಹ ಬಳಕೆ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ 9 ಅಯ್ಯಪ್ಪ ಮಾಲಾಧಾರಿಗಳು ಗಂಭೀರವಾಗಿ ಗಾಯಗೊಂಡ ಘಟನೆ ಭಾನುವಾರ ತಡರಾತ್ರಿ ನಗರದ ಉಣಕಲ್ ನ ಅಚ್ಚಮ್ಮ ಕಾಲೋನಿಯಲ್ಲಿ ನಡೆದಿದೆ.
ವಿನಾಯಕ, ಪ್ರಕಾಶ, ಶಂಕರ್, ಮಂಜುನಾಥ, ಸಂಜಯ್, ಪ್ರವೀಣ್, ತೇಜಸ್ ಎಂಬ ಅಯ್ಯಪ್ಪ ಮಾಲಾಧಾರಿಗಳು ಗಾಯಗೊಂಡಿದ್ದಾರೆ. ಗ್ಯಾಸ್ ಲೀಕ್ ಆಗಿ, ದೀಪದ ಜೊತೆ ಬೆಂಕಿ ತಗುಲಿ ಸಿಲಿಂಡರ್ ಸ್ಪೋಟಗೊಂಡಿದೆ ಎನ್ನಲಾಗಿದ್ದು, ಕೂದಲೆಳೆ ಅಂತರದಿಂದ ದೊಡ್ಡ ಅನಾಹುತವೊಂದು ತಪ್ಪಿದಂತಾಗಿದೆ.

ಮಧ್ಯರಾತ್ರಿ ನಡೆದ ಸಿಲಿಂಡರ್ ಸ್ಪೋಟದಿಂದಾಗಿ ಕೆಲವು ಅಯ್ಯಪ್ಪ ಮಾಲಾಧಾರಿಗಳ ಸ್ಥಿತಿ ಚಿಂತಾಜನಕವಾಗಿದ್ದು, ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಈ ಕುರಿತು ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.