ಹುಬ್ಬಳ್ಳಿ: ಸಿಲಿಂಡರ್ ಸ್ಟೋಟ ಪ್ರಕರಣದಲ್ಲಿ ಗಾಯಗೊಂಡಿದ್ದ ಮತ್ತೋರ್ವ ಗಾಯಾಳು ಸಾವನ್ನಪ್ಪಿದ್ದು, ಸಾವಿನ ಸಂಖ್ಯೆ 6 ಏರಿಕೆಯಾಗಿದೆ.

ಮಂಜುನಾಥ ವಾಗ್ಮೋಡೆ (22 ) ಸಾವನ್ನಪ್ಪಿದ ಮಾಲಾಧಾರಿಯಾಗಿದ್ದಾನೆ. ಮೃತ ಮಂಜುನಾಥ ಎರಡನೇ ವರ್ಷ ಡಿಪ್ಲೊಮಾ ಓದುತ್ತಿದ್ದ. ಎರಡನೇ ವರ್ಷ ಅಯ್ಯಪ್ಪ ವೃತ ಮಾಡಲು ಮಾಲೆ ಹಾಕಿದ್ದ. ಇವತ್ತು ಒಂದೇ ದಿನ ಇಬ್ಬರು ಮಾಲಾಧಾರಿಗಳು ಮೃತಪಟ್ಟಿದ್ದಾರೆ. ತಡರಾತ್ರಿ ಶಂಕರ ಚವ್ಹಾಣ್ ಮೃತಪಟ್ಟರೆ, ಬೆಳಗ್ಗೆ ಮಂಜುನಾಥ ವಾಗ್ಮೋಡೆ ಮೃತಪಟ್ಟಿದ್ದಾರೆ.
ಸಿಲಿಂಡರ್ ಸ್ಫೋಟದಲ್ಲಿ 9 ಜನ ಗಾಯಗೊಂಡಿದ್ದರು. ಇವರಲ್ಲಿ 6 ಜನ ಮೃತಪಟ್ಟಿದ್ದು, ಇನ್ನೂ 3 ಜನರಿಗೆ ಚಿಕಿತ್ಸೆ ಮುಂದುವರೆದಿದ್ದು,ಪ್ರಕಾಶ್ ಬಾರಕೇರ್ , ತೇಜಸ್ವರ್ ಸಾತರೆ,ವಿನಾಯಕ್ ಬಾರಕೇರ್ ಚಿಕಿತ್ಸೆ ಪಡೆಯುತ್ತಿದ್ದು, ವಿನಾಯಕ್ ಬಾರಕೇರ್ ಆರೋಗ್ಯದಲ್ಲಿ ಚೇತರಿಕೆ ಕಂಡಿದ್ದಾರೆ.