ಹುಬ್ಬಳ್ಳಿ : ವ್ಯಕ್ತಿಯೋರ್ವ ತಮ್ಮ ಧರ್ಮಕ್ಕೆ ಮತಾಂತರಗೊಳ್ಳಬೇಕೆಂದು ತನ್ನ ಪತ್ನಿಗೆ ಪ್ರಚೋದನೆ ನೀಡಿ ಕಿರುಕುಳ ನೀಡುತ್ತಿರುವುದಾಗಿ ಆರೋಪ ಕೇಳಿ ಬಂದಿದ್ದು, ಪ್ರಕರಣ ಹುಬ್ಬಳ್ಳಿಯ ಬೆಂಡಿಗೇರಿ ಪೊಲೀಸ್ ಠಾಣೆ ಮೆಟ್ಟಿಲೇರಿದೆ.

ನಗರದ ಕುಸುಗಲ್ ರಸ್ತೆಯ ಜನತಾ ಕಾಲೋನಿಯ ನಿವಾಸಿ ಶಫೀಅಹ್ಮದ್ ಕರ್ನೂಲ್ ಎಂಬಾತ ಮಂಟೂರ ರಸ್ತೆಯ ಶೀಲಾಕಾಲೋನಿಯ ನಿವಾಸಿಯ ಯುವತಿಯನ್ನು 2014-15 ರಲ್ಲಿ ಪ್ರೀತಿಸಿ ರೆಜಿಸ್ಟರ್ ಮದುವೆಯಾಗಿದ್ದ, ಬಳಿಕ 2017 ರಲ್ಲಿ ಅಧಿಕೃತವಾಗಿ ಹಿಂದೂ ಯುವತಿಯೊಂದಿಗೆ ಶಫಿ ಮದುವೆಯಾಗಿದ್ದಾನೆ. ಆದರೆ ಪ್ರೀತಿಸುತ್ತಿದ್ದ ವೇಳೆ ಅನಿಲ್ ಎಂಬ ಹೆಸರನ್ನು ಸುಳ್ಳು ಹೇಳಿ ಮದುವೆಯಾಗಿದ್ದಾನೆ.
ಇದೀಗ ತಮ್ಮ ಮುಸ್ಲಿಂ ಧರ್ಮಕ್ಕೆ ಮತಾಂತರವಾಗುವಂತೆ ಪತಿ ಶಫಿ ದಿನನಿತ್ಯ ಕಿರುಕುಳ ನೀಡುತ್ತಿದ್ದಾನೆಂದು ಯುವತಿ ಆರೋಪ ಮಾಡಿದ್ದಾಳೆ.ಯುವತಿ ಇದೀಗ ಬೆಂಡಿಗೇರಿ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದು, ಪತಿ ಶಫಿ ಅಹ್ಮದ್ ನಿಂದ ನನಗೆ ಮುಕ್ತಿ ಕೊಡಿಸಬೇಕು ಅವನ ವಿರುದ್ಧ ಕಾನೂನು ಕ್ರಮ ಜರುಹಿಸಬೇಕು ಎಂದು ಪತ್ನಿ ಆಗ್ರಹಿಸಿದ್ದಾಳೆ.