ಹುಬ್ಬಳ್ಳಿ: ಹುಬ್ಬಳ್ಳಿಯ ನವನಗರದ ವ್ಯಕ್ತಿಯೊಬ್ಬರ ಪುತ್ರನೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದ ಸಲೂನ್ ಅಂಗಡಿಯ ಹುಡುಗರ ವಿರುದ್ಧ, ನವನಗರ ಎಪಿಎಂಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನವನಗರದ ಲೋರಿಯಲ್ ಕಟಿಂಗ್ ಶಾಪ್‌ಗೆ ಹೋದ ವೇಳೆ ಹುಡುಗರು ಸೇರಿ ಎಲ್ಲೆಂದರಲ್ಲಿ ಹುಡುಗನಿಗೆ ಚಿವುಟ್ಟಿದ್ದರು. ಮರ್ಮಾಂಗಕ್ಕೆ ದಾರ ಕಟ್ಟುತ್ತಿದ್ದರು. ಮತ್ತೆ ಅಸಭ್ಯವಾಗಿ ವರ್ತಿಸುತ್ತಿದ್ದರು. ಸಿಗರೇಟ್ ಸೇದುವಂತೆ ಒತ್ತಾಯಿಸುತ್ತಿದ್ದರು. ನಿಮ್ಮ ಮನೆಯಲ್ಲಿ ಹೇಳಬಾರದು ಎಂದು ಧಮಕಿ ಹಾಕುತ್ತಿದ್ದರು.
ಇದಲ್ಲೆವನ್ನೂ ಸಹಿಸಿಕೊಳ್ಳದ ನನ್ನ ಮಗ ನಮ್ಮ ಮುಂದೆ ಎಲ್ಲವನ್ನೂ ವಿವರಿಸಿದ್ದಾನೆ. ನನ್ನ ಮಗನಿಗೆ ಮಾನಸಿಕ ಮತ್ತು ದೈಹಿಕ ಹಿಂಸೆ ಕೊಟ್ಟವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ದೂರಿನಲ್ಲಿ ಹುಡುಗನ ತಂದೆ ವಿವರಿಸಿದ್ದಾರೆ.
ಸದ್ಯ ಎಪಿಎಂಸಿ ನವನಗರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.