ಹುಬ್ಬಳ್ಳಿ: ರಾಜ್ಯದಲ್ಲಿ ದರೋಡೆ ಪ್ರಕರಣ ಹೆಚ್ಚಾದ ಹಿನ್ನಲೆ ಸರ್ಕಾರವೂ ಅಲರ್ಟ್ ಆಗಿದ್ದು, ಹಿರಿಯ ಅಧಿಕಾರಿಗಳ ಸೂಚನೆ ಮೇರೆಗೆ ಇಂದು ಹುಬ್ಬಳ್ಳಿ ಧಾರವಾಡ ಕಮಿಷನರೇಟ್ ವತಿಯಿಂದ MOBಗಳ ಪರೇಡ ನಡೆಸಲಾಯಿತು.
ಅವಳಿ ನಗರದಲ್ಲಿ ಸ್ಥಳೀಯ ಹಾಗೂ ಪರಸ್ಥಳೀಯರು ಸೇರಿ ಸುಮಾರು 3600 ಜನ MOB ಕಾರ್ಡ್ ಹೋಲ್ಡರ್ ಗಳಿದ್ದಾರೆ. ಇಂದು ಒಟ್ಟು 930 ಜನ MOB ಕಾರ್ಡ್ ಹೋಲ್ಡರ್ ಗಳನ್ನು ಕರೆದು ಕಮೀಷನರ್ ಖಡಕ್ಕಾಗಿ ಎಚ್ಚರಿಕೆ ನೀಡಿದ್ದಾರೆ.
ದರೋಡೆ ಪ್ರಕರಣಗಳು ಹೆಚ್ಚಾದ ಹಿನ್ನಲೆ ಮುಂಜಾಗೃತ ಕ್ರಮವಾಗಿ ಪೊಲೀಸ್ ಕಮೀಷನರ್ ಎನ್ ಶಶಿಕುಮಾರ ಅವರು ಪರೇಡ್ ನಲ್ಲಿದ್ದ MOBಗಳಿಗೆ ಎಚ್ಚರಿಕೆ ನೀಡಿ, ಕೊಲೆ, ಸುಲಿಗೆ, ಡಕಾಯಿತಿ, ಕಳ್ಳತನ, ದರೋಡೆ ಪ್ರಕರಣದಲ್ಲಿ ಭಾಗಿಯಾದ್ರೆ ಅಂತವರ ವಿರುದ್ದ MOB ಕಾರ್ಡ್ ಓಪನ್ ಮಾಡಲಾಗುತ್ತೆ ಎಂದು ಹೇಳಿದರು.
ಹುಬ್ಬಳ್ಳಿ ಧಾರವಾಡ ಅವಳಿ ನಗರದಲ್ಲಿ ಬರೋ ಪೊಲೀಸ್ ಠಾಣೆಗಲ್ಲಿ 50 ರಿಂದ 60 ಜನ MOB ಕಾರ್ಡ್ ಹೋಲ್ಡರ್ ಗಳಿದ್ದಾರೆ. ಅವರನ್ನೆಲ್ಲ ಕರೆದು ಎಚ್ಚರಿಕೆ ನೀಡಿದ್ದು, ಮತ್ತೆ ಅಂತಹ ಪ್ರಕರಣದಲ್ಲಿ ಭಾಗಿಯಾದ್ರೆ ಗಡಿಪಾರು ಮಾಡುವುದಾಗಿ ಹೇಳಿದರು.
ಇದಲ್ಲದೆ ಕೆಲವರು 20 ವರ್ಷಗಳ ಹಿಂದೆ ಮಾಡಿದ ಅಪರಾಧಕ್ಕೆ ಅವರಿಗೆ MOB ಕಾರ್ಡ್ ನೀಡಲಾಗಿದೆ. ಅಂತವರ ಬಗ್ಗೆ ಪರಿಶೀಲನೆ ಮಾಡಿ ಅಂತವರ ಮೇಲೆ ಇರುವ MOB ಕಾರ್ಡನ್ನು ರದ್ದು ಮಾಡಲಾಗುವುದು ಎಂದು ತಿಳಿಸಿದರು.
ಒಟ್ಟಾರೆಯಾಗಿ ಇತ್ತೀಚೆಗೆ ಮನೆ, ದೇವಸ್ಥಾನ, ಬ್ಯಾಂಕುಗಳು ಸೇರಿದಂತೆ ವಿವಿಧೆಡೆ ದರೋಡೆ ಪ್ರಕರಣಗಳು ಹೆಚ್ಚಾಗುತ್ತಿದ್ದು, ಜೀವನಪೂರ್ತಿ ದುಡಿದು ಬ್ಯಾಂಕ್ ನಲ್ಲಿ ಇಡುವ ಹಣವನ್ನು ದರೋಡೆ ಮಾಡಲು ಯತ್ನಿಸುತ್ತಿರುವ ದರೋಡೆಕೋರರ ಅಟ್ಟಹಾಸದಿಂದ ಅವಳಿನಗರದ ಮಂದಿ ಭೀತಿಗೊಂಡಿದೆ. ಬ್ಯಾಂಕ್ ನಲ್ಲಿ ಇಡುವಂತಹ ಹಣಕ್ಕೂ ರಕ್ಷಣೆಯಿಲ್ಲದಂತಾಗಿದೆಯಾ ಎಂಬ ಗೊಂದಲ ಸಾರ್ವಜನಿಕರಲ್ಲಿ ಮೂಡಿದ್ದು, ಹುಬ್ಬಳ್ಳಿ ಧಾರವಾಡ ಕಮೀಷನರೇಟ್ ಏನು ಕ್ರಮ ಕೈಗೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.