ಕಾರವಾರ: ಯಲ್ಲಾಪುರ ತಾಲೂಕಿನ ಅರೆಬೈಲ್ ಘಟ್ಟದ ಸಮೀಪ ತರಕಾರಿ ತುಂಬಿದ್ದ ಲಾರಿ ಬುಧವಾರ ನಸುಕಿನ ಜಾವ ಪಲ್ಟಿಯಾಗಿ, ಅದರಲ್ಲಿದ್ದ 9 ಮಂದಿ ಮೃತಪಟ್ಟಿದ್ದಾರೆ.

ಕುಮಟಾದಲ್ಲಿ ನಡೆಯುವ ವಾರದ ಸಂತೆಗೆ ಹಾವೇರಿ ಜಿಲ್ಲೆಯ ಸವಣೂರಿನಿಂದ ಯಲ್ಲಾಪುರ ಮಾರ್ಗವಾಗಿ ತರಕಾರಿ ಸಾಗಿಸುವ ವೇಳೆ ದುರ್ಘಟನೆ ನಡೆದಿದೆ. ಮೃತರೆಲ್ಲರೂ ತರಕಾರಿ ವ್ಯಾಪಾರಿಗಳು ಎಂಬುದಾಗಿ ಪೊಲೀಸರು ತಿಳಿಸಿದ್ದಾರೆ.

ಲಾರಿಯಲ್ಲಿ ತರಕಾರಿ ದಾಸ್ತಾನಿನ ಜೊತೆಗೆ 25ಕ್ಕೂ ಹೆಚ್ಚು ವ್ಯಾಪಾರಿಗಳು ಪ್ರಯಾಣಿಸುತ್ತಿದ್ದರು. ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಪಕ್ಕದ ಕಂದಕಕ್ಕೆ ಲಾರಿ ಉರುಳಿದ ಪರಿಣಾಮ 9 ಮಂದಿ ಮೃತಪಟ್ಟಿದ್ದು, 8ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯಗಳಾಗಿದೆ. ಅವರನ್ನು ಹುಬ್ಬಳ್ಳಿಯ ಕಿಮ್ಸ್ ಗೆ ಕಳಿಸಲಾಗಿದೆ ಎಂದು ಯಲ್ಲಾಪುರ ಠಾಣೆ ಪೊಲೀಸರು ತಿಳಿಸಿದ್ದಾರೆ.

ಫಯಾಝ್ ಇಮಾಮ್ ಸಾಬ್ ಜಮಖಮ್ಮಡಿ, ತಾ: ಸವಣೂರ (40), ವಾಸಿಂ ಮುಲ್ಲಾ ಮುದಗೇರಿ ಸವಣೂರ, (25), ಇಜಾಜ್ ಮುಷ್ತಾಕ್ ಮುಲ್ಲಾ (20) ಸವಣೂರು, ಸಾದಿಕ್ ಭಾಷಾ ಪಾರಸ್ (30) ಸವಣೂರು, ಗುಲಾಂ ಹುಸೇನ್ ಗುಡುಸಾಬ್ ಜವಳಿ (40) ಸವಣೂರ, ಇಮ್ತಿಯಾರ್ ಜಫರ (45), ಅಲ್ಫಾಜ್ ಜಾಫರ್ ಮಂಡಕಿ (25), ಜಲಾನಿ ಬಬ್ದುಲ್ ಗಫಾರ್ ಝಕಾತಿ (20), ಅಸ್ಲಾಂ ಬಾಬು ಬೆಣ್ಣೆ (24) ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಮೃತರೆಲ್ಲರೂ ಸವಣೂರಿನವರು. ಉಳಿದ ನಾಲ್ವರ ಸ್ಥಿತಿ ಚಿಂತಾಜನಕವಾಗಿದೆ.
