ಹುಬ್ಬಳ್ಳಿ: ವಿವಾಹಿತ ಮಹಿಳೆಯೊಂದಿಗೆ ಮಾತನಾಡಿದ್ದಕ್ಕೆ ಬೆತ್ತಲೆ ಮಾಡಿ ಮಾಡಿ ಹಲ್ಲೆ ಮಾಡಿರುವ ಘಟನೆ ನಗರದ ಟಿಪ್ಪು ನಗರದಲ್ಲಿ ನಿನ್ನೆ ಹಾಡಹಗಲೇ ನಡೆದಿದೆ.

ನಾಲ್ಕು ಜನ ಮಕ್ಕಳ ತಾಯಿಯ ಜೊತೆಗೆ ಮುಜಾಫೀರ್ ಪೋನ್ ನಲ್ಲಿ ಮಾತನಾಡಿದ್ದ, ಈ ವಿಷಯ ತಿಳಿದ ಕೂಡಲೇ ಯುವಕನನ್ನು ಅಪಹರಣಗೊಳಿಸಿ ಬೆತ್ತಲೆ ಮಾಡಿ ದೇಹದ ವಿವಿಧೆಡೆ ಬ್ಲೇಡ್ ನಿಂದ ಹಲ್ಲೆ ಮಾಡಿ ಮಹಿಳೆಯ ಸಂಬಂಧಿಕರು ಮನೆಗೆ ಬಿಟ್ಟಿದ್ದಾರೆ.

ಮೊಹಮ್ಮದ್, ಮಾಬುಲಿ, ಮಲೀಕ್, ಮೈನು, ಶಗರಿ, ನದೀಮ್, ಸಮೀರ್ ಸೇರಿ ಹತ್ತು ಹದಿನೈದು ಜನರಿಂದ ಹಲ್ಲೆ ಮಾಡಲಾಗಿದೆ ಎಂದು ಹಲ್ಲೆಗೊಳಗಾದ ಯುವಕ ಆರೋಪಿಸಿದ್ದಾನೆ.
ಗಾಯಗೊಂಡ ಯುವಕನನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.ಈ ಕುರಿತಂತೆ ಕಸಬಾಪೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈಗಾಗಲೇ ಮೂರು ಜನ ಆರೋಪಿಗಳನ್ನು ವಶಕ್ಕೆ ಪಡೆದು ಪೊಲೀಸರು ಉಳಿದವರ ಬಂಧನಕ್ಕೆ ಬಲೆ ಬೀಸಿದ್ದಾರೆ.