ಹುಬ್ಬಳ್ಳಿ: ಪತಿಯಿಂದ ಪತ್ನಿಗೆ ಕಿರುಕುಳ ಆಗಿರುವ ಪ್ರಕರಣಗಳು ತೀರಾ ಸಾಮಾನ್ಯ. ಆದರೆ ಇಲ್ಲಿ ಪತ್ನಿಯಿಂದಲೇ ಪತಿ ಕಿರುಕುಳ ಅನುಭವಿಸಿದ್ದು, ಅದನ್ನು ತಾಳಲಾರದೆ ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಅಶೋಕ್ ನಗರ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ನಗರದ ಚಾಮುಂಡೇಶ್ವರಿ ನಗರದ ನಿವಾಸಿ ಪೀಟರ್ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಕಳೆದೆ ಕೆಲವ ದಿನಗಳಿಂದ ಪತ್ನಿ ಪಿಂಕಿ ಜೊತೆ ಕ್ಷುಲಕ ಕಾರಣಕ್ಕೆ ಜಗಳ ನಡೆದಿದೆ. ತನ್ನ ಹೆಂಡತಿ *ಪಿಂಕಿ ಈಸ್ ಕಿಲ್ಲಿಂಗ್ ಮೀ ಸೀ ವಾಂಟ್ ಮೈ ಡೆಥ್, ಡ್ಯಾಡಿ ಆಯಮ್ ಸಾರಿ* ಎಂದು ಡೆಥ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಆತ್ಮಹತ್ಯೆಗೂ ಮುಂಚಿತವಾಗಿ ಶವದ ಪೆಟ್ಟಿಗೆ ಮೇಲೆ *ನನ್ನ ಹೆಂಡತಿಯ ಕಾಟ ತಾಳಲಾರದೇ ಸತ್ತೇನು* ಎಂದು ಬರೆಯಿರಿ ಅಂತ ಹೇಳಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಈ ಕುರಿತು ಅಶೋಕ್ ನಗರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.