ಹುಬ್ಬಳ್ಳಿ: ಹೆಂಡತಿ ಕಿರುಕುಳ ತಾಳಲಾರದೇ ಗಂಡ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ಬೇರೆ ತಿರುವು ಪಡೆದಿದೆ.
ಹೌದು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಗಂಡ ಪೀಟರ್ ಸಾವಿಗೆ ಹೆಂಡತಿ ಪಿಂಕಿಯ ಅನೈತಿಕ ಸಂಬಂಧ ಕಾರಣವೆಂದು ಪೀಟರ್ ಕುಟುಂಬಸ್ಥರು ಆರೋಪಿಸುತ್ತಿದ್ದಾರೆ. ಇದೆ ಕಾರಣಕ್ಕೆ ಕಳೆದ ಏಳೆಂಟು ತಿಂಗಳುಗಳಿಂದ ದಂಪತಿಗಳು ದೂರವಾಗಿದ್ದರು ಎಂಬ ಗುಮಾನಿ ಇದೆ.
ಅನೈತಿಕ ಸಂಬಂಧವನ್ನು ಪ್ರಶ್ನಿಸಿದ್ದಕ್ಕೆ ಪತ್ನಿ ಪಿಂಕಿ ಗಂಡನಿಂದ ಡೈವೋರ್ಸ್ ಗಾಗಿ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾಳೆ, ಅಷ್ಟೇ ಅಲ್ಲದೆ ಜೀವನಾಂಶಕ್ಕಾಗಿ 20 ಲಕ್ಷ ಕೊಡುವಂತೆ ಪೀಡಿಸುತ್ತಿದ್ದಳು. ಇದರಿಂದಾಗಿಯೇ ಮನನೊಂದು ನಮ್ಮ ಮಗ ನೇಣಿಗೆ ಶರಣಾಗಿದ್ದಾನೆಂದು ಪೀಟರ್ ಕುಟುಂಬಸ್ಥರು ಆರೋಪಿಸುತ್ತಿದ್ದಾರೆ.
ನಮ್ಮ ಮಗನ ಸಾವಿಗೆ ಪತ್ನಿ ಹಾಗೂ ಆಕೆಯ ಮನೆಯವರೂ ಕಾರಣ, ಅವರನ್ನು ಬಂಧಿಸಿ ನಮ್ಮ ಮಗನ ಸಾವಿಗೆ ನ್ಯಾಯ ಕೊಡಿಸಬೇಕೆಂದು ಪೀಟರ್ ಕುಟುಂಬಸ್ಥರು ಆಗ್ರಹಿಸುತ್ತಿದ್ದಾರೆ.