ಹುಬ್ಬಳ್ಳಿ: ನಿನ್ನೆ ತಡ ರಾತ್ರಿ ಗುರುನಾಥ ನಗರದ ಇಂದ್ರಪ್ರಸ್ಥ ನಗರದ ನಿವಾಸಿ ಆಕಾಶ್ ವಾಲ್ಮೀಕಿ ಎಂಬ 24 ವರ್ಷದ ಯುವಕನ್ನು ಮನಸೋ ಇಚ್ಛೆ ಚಾಕುವಿನಿಂದ ಚುಚ್ಚಿ ಬರ್ಬರವಾಗಿ ಕೊಲೆ ಮಾಡಿ ಆರೋಪಿಗಳು ಪರಾರಿಯಾಗಿದ್ದರು.

ಕೊಲೆ ನಡೆದ ಸ್ಥಳಕ್ಕೆ ಪೋಲಿಸ್ ಕಮಿಷನರ್ ಎನ್ ಶಶಿಕುಮಾರ, ಡಿಸಿಪಿಗಳಾದ ಮಹಾನಿಂಗ ನಂದಗಾವಿ, ಹಾಗೂ ರವೀಶ ಅವರು ಬೇಟಿ ನೀಡಿ ವಿಶೇಷ ತಂಡ ರಚನೆ ಮಾಡುವ ಮೂಲಕ ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದರು. ಇನ್ನು ಕೊಲೆ ನಡೆದ ಸ್ಥಳದಲ್ಲಿರುವ ಸಿಸಿಟಿವಿ ಕ್ಯಾಮರಾ ಪರಿಶೀಲನೆ ನಡೆಸಿ, ಆರೋಪಿಗಳ ಬೆನ್ನಟ್ಟಿದ ಪೊಲೀಸರು ಖಚಿತ ಮಾಹಿತಿ ಮೇರೆಗೆ MTS ಕಾಲೋನಿಯಲ್ಲಿ ಅಡಗಿ ಕುಳಿತಿದ್ದ ಆರೋಪಿಗಳನ್ನ ಕೇವಲ ಐದು ಗಂಟೆಯಲ್ಲಿ ಬಂಧಿಸಿ ಹೆಡೆಮುರಿಕಟ್ಟಿದ್ದಾರೆ.

ಇನ್ನು ಬಂಧನದ ವೇಳೆ ಪೊಲೀಸರ ಮೇಲೆಯೇ ಹಲ್ಲೆಗೆ ಮುಂದಾಗಿ ಪರಾರಿಯಾಗಲು ಯತ್ನಿಸಿದ್ದ ಆರೋಪಿಗಳಿಗೆ ಮೊದಲು ಒಂಬತ್ತು ಸುತ್ತು ಗುಂಡು ಹಾರಿಸುವ ಮೂಲಕ ಎಚ್ಚರಿಕೆ ಕೊಟ್ಟಿದ್ದಾರೆ. ಇದಕ್ಕೂ ಬಗ್ಗದೇ ಪೊಲೀಸರನ್ನೇ ತಳ್ಳಿ ಓಡಿಹೋಗಲು ಮುಂದಾಗಿದ್ದಾರೆ. ಈ ವೇಳೆ ತಮ್ಮ ಆತ್ಮರಕ್ಷಣೆಗಾಗಿ ಪಿಎಸ್ಐಗಳಾದ ಶ್ರೀಮಂತ ಹುನಸಿಕಟ್ಟಿ ಹಾಗೂ ಸುನಿಲ್ ಎಂ ಆರೋಪಿಗಳಾದ ವಿನೊದ್, ಯಲ್ಲಪ್ಪ ಹಾಗೂ ಅಭಿಷೇಕ್ ನ ಕಾಲಿಗೆ ಗುಂಡು ಹೊಡೆಯುವ ಮೂಲಕ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಬಂಧನದ ಸಮಯದಲ್ಲಿ ಪೊಲೀಸಾರದ ಶರಣಗೌಡ ಮೂಲಿಮನಿ ಹಾಗೂ ಮುತ್ತಪ್ಪ ಲಮಾಣಿ ಎಂಬುವರಿಗೆ ಗಾಯಗಳಾಗಿದ್ದು ಅವರನ್ನು ಸಹ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
https://www.instagram.com/reel/DFXggqDsvdo/?igsh=amFmeXd2MmhwaXZ3
ಸದ್ಯ ಬಂಧಿತ ಆರೋಪಿಗಳಾದ ಆನಂದನಗರದ ನಿವಾಸಿ ಅಭಿಷೇಕ ಶಿರೂರ, ವಿನೋದ ಅಂಬಿಗೇರ ಹಾಗೂ ಯಲ್ಲಪ್ಪ ಕೋಟಿ ಎಂಬುವರನ್ನು ಚಿಕಿತ್ಸೆಗಾಗಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.ಈ ಕುರಿತಂತೆ ವಿದ್ಯಾನಗರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.