ಹುಬ್ಬಳ್ಳಿ: ಕ್ಷುಲಕ ವಿಚಾರಕ್ಕೆ ವ್ಯಕ್ತಿಯೋರ್ವನಿಗೆ ಚಾಕು ಇರಿದ ಘಟನೆ ಈಗಷ್ಟೇ ನವನಗರ ಎಎಂಪಿಸಿ ಪೋಲಿಸ ಠಾಣೆ ವ್ಯಾಪ್ತಿಯಲ್ಲಿ ನಡೆಡಿದೆ.
ಜೇಬಿಉಲ್ಲಾ ಬಳ್ಳಾರಿ (35) ಹಲ್ಲೆಗೆ ಒಳಗಾದ ವ್ಯಕ್ತಿಯಾಗಿದ್ದು, ಜನ್ಮ ದಿನದ ಆಚರಣೆವೇಳೆ ಬೇರೆಂದು ಗುಂಪಿನ ವ್ಯಕ್ತಿಗಳ ಜೊತೆ ಕ್ಷುಲಕ ವಿಚಾರಕ್ಕೆ ಮಾತಿಗೆ ಮಾತು ಬೆಳೆದು ಚಾಕು ಹಾಕುವ ಮೂಲಕ ಜಗಳ ಕೊನೆಗೊಂಡಿದೆ.

ಸಿರಾಜ್ (44) ಅನ್ನೋ ವ್ಯಕ್ತಿಯೇ ಚಾಕು ಹಾಕಿದ ಆರೋಪಿಯಾಗಿದ್ದು, ಸದ್ಯ ಎಎಂಪಿಸಿ ನವನಗರ ಇನ್ಸ್ಪೆಕ್ಟರ್ ಸೆಮಿವುಲ್ಲಾ ನೇತೃತ್ವದ ತಂಡ ಆರೋಪಿಯನ್ನು ಕೆಲವೇ ಘಂಟೆಗಳಲ್ಲಿ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ಹಲ್ಲೆಗೆ ಒಳಗಾದ ವ್ಯಕ್ತಿ ಜೇಬಿಉಲ್ಲಾ ನನ್ನು ಚಿಕಿತ್ಸೆಗಾಗಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಿಮ್ಸ್ ಆಸ್ಪತ್ರೆಗೆ ಡಿಸಿಪಿ ಮಹಾನಿಂಗ ನಂದಗಾವಿ, ಎಸಿಪಿ ಶಿವಪ್ರಕಾಶ್ ನಾಯಕ್ ಬೇಟಿ ನೀಡಿ ಹೆಚ್ಚಿನ ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ.