ಹುಬ್ಬಳ್ಳಿ: ಅಂಗಡಿ ಮುಂದೆ ಆಟೋ ನಿಲ್ಲಿಸಬೇಡ ಎಂದು ಅಂಗಡಿ ಸಿಬ್ಬಂದಿಗಳು ಆಟೋ ಡ್ರೈವರ್ ಮೇಲೆ ಹಲ್ಲೆ ಮಾಡಲು ಯತ್ನಿಸಿದ್ದು, ಪ್ರತಿಯಾಗಿ ಆಟೋ ಡ್ರೈವರ್ ತನ್ನ ಸಂಬಂಧಿಕರೊಡನೆ ಬಂದು ಅಂಗಡಿ ಸಿಬ್ಬಂದಿಗಳ ಮೇಲೆ ಹಲ್ಲೆ ಮಾಡಿರುವ ಘಟನೆ ಇತ್ತೀಚಿಗೆ ನಡೆದಿದ್ದು, ಸಿಸಿ ಕ್ಯಾಮರಾದಲ್ಲಿ ದೃಶ್ಯ ಸೆರೆಯಾಗಿದೆ.
ನಗರದ ಟೌನ್ ಹಾಲ್ ಮುಂಭಾಗದಲ್ಲಿ ಸ್ತುತಿ ಸೀಟ್ ಕವರ್ ಅಂಗಡಿ ಮುಂದೆ ಆಸರಿ ಎಂಬ ಆಟೋ ಡ್ರೈವರ್ ಆಟೋ ನಿಲ್ಲಿಸಿದ್ದ ಸೀಟ್ ಕವರ್ ಅಂಗಡಿಯಲ್ಲಿ ಕೆಲಸ ಮಾಡುವ ಸಿಬ್ಬಂದಿ ಅಂಗಡಿ ಮುಂದುಗಡೆ ಆಟೋ ನಿಲ್ಲಿಸಬೇಡಾ ಎಂದು ಹೇಳಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿದ್ದಾರಂತೆ.. ಇದಕ್ಕೆ ಕುಪಿತಗೊಂಡ ಆಟೋ ಡ್ರೈವರ್ ಆಸರಿ ತನ್ನ ತಮ್ಮ ಕಾಲಾ ರಸೂಲ್ ಸೇರಿ ಕೆಲವರನ್ನು ಕರೆದುಕೊಂಡು ಹೋಗಿ ಅಂಗಡಿ ಸಿಬ್ಬಂದಿಗೆ ಹಲ್ಲೆ ಮಾಡಿದ್ದಾರೆ.
ಸುಮಂತ್ ಜಮಖಂಡಿ, ಡೇವಿಡ್ ಜಮಖಂಡಿ, ಅಭಿ ಗಾಮನಗಟ್ಟಿ ಗಾಯಗೊಂಡ ವ್ಯಕ್ತಿಯಾಗಿದ್ದಾರೆ. ಘಟನಾ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ದೃಶ್ಯ ಸೆರೆಯಾಗಿದ್ದು, ಸ್ಥಳಕ್ಕೆ ಶಹರ ಠಾಣೆಯ ಪೊಲೀಸರು ಭೇಟಿ ನೀಡಿ ಹಲ್ಲೆ ಮಾಡಿದ ವ್ಯಕ್ತಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.