ಹುಬ್ಬಳ್ಳಿ: ವರದಕ್ಷಿಣೆ ಕಿರುಕುಳ ಹಿನ್ನಲೆ ಪತಿಯಿಂದಲೇ ಪತ್ನಿ ಕೊಲೆ ಮಾಡಿರುವುದಾಗಿ ಪತ್ನಿಯ ಸಂಬಂಧಿಕರು , ಪತಿ ಹಾಗೂ ಪತಿ ಕುಟುಂಬಸ್ಥರ ಮೇಲೆ ಆರೋಪ ಮಾಡಿರುವುದು ಕೇಳಿ ಬಂದಿದೆ.

ಅಣ್ಣೀಗೇರಿ ಪಟ್ಟಣದಲ್ಲಿ ವರದಕ್ಷಿಣೆ ಕಿರುಕುಳಕ್ಕೆ ನಿನ್ನೆ ಮಂಗಳವಾರ 21 ವರ್ಷದ ಶಭನಮ್ ಮಹಿಳೆ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪತಿ ಹಾಗೂ ಆತನ ಕುಟುಂಬಸ್ಥರೆ ಕೊಲೆ ಮಾಡಿರುವುದಾಗಿ ಶಭನಮ್ ಕುಟುಂಬಸ್ಥರು ಆರೋಪಿಸಿದ್ದಾರೆ.
ಶಭನಮ್ ಪತಿ ಸಾಮದಾನಿ ಗೌಸುಸಾಮ್, ಗೌಸುಸಾಬ್ ಮಾಬುಸಾಬ್, ಫಾತಿಮಾ ಗೌಸುಸಾಬ್, ದಾವಲ್ಮಾ ರಫಿಕ್ ಸೇರಿ ನಾಲ್ವರು ವಿರುದ್ಧ ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ದೂರನ್ನು ಶಭನಮ್ ಕುಟುಂಬಸ್ಥರು ದಾಖಲಿಸಿದ್ದಾರೆ.
ಕಳೆದ ನಾಲ್ಕು ವರ್ಷಗಳ ಹಿಂದೆ ಶಭನಮ್ ಮದುವೆಯಾಗಿದ್ದಳು ಮೂಲತಃ ಈಕೆ ಕುಂದಗೋಳ ತಾಲೂಕಿನ ಕಮಡೊಳ್ಳಿ ನಿವಾಸಿಯಾಗಿದ್ದ ಶಭನಮ್ ಗೆ ಪತಿ ಐದು ಲಕ್ಷ ಹಣವನ್ನು ತಗೆದುಕೊಂಡು ಬರುವಂತೆ ಹೇಳಿದ್ದ, ತವರು ಮನೆಯಿಂದ ತರದೆ ಇದ್ದಾಗ ಕಿರುಕುಳ ನೀಡಿದ್ದಾರೆ. ಕಿರುಕುಳಕ್ಕೆ ಬೇಸತ್ತು ಮನೆಯಲ್ಲಿ ಆತ್ಮಹತ್ಯೆ ಶರಣಾಗಿದ್ದಳೆಂದು ಮೃತಳ ಗಂಡ ಆಸ್ಪತ್ರೆಗೆ ಆಕೆಯನ್ನು ದಾಖಲಿಸಿ ಸ್ವತಃ ತಾನೇ ಅಣ್ಣಿಗೇರಿ ಪೊಲೀಸರಿಗೆ ಶರಣಾಗಿದ್ದಾನೆ, ಇತ್ತ ಚಿಕಿತ್ಸೆ ಫಲಿಸದೇ ಸರ್ಕಾರಿ ಆಸ್ಪತ್ರೆಯಲ್ಲಿ ಗೃಹನಿ ಸಾವನ್ನಪ್ಪಿದ್ದಾಳೆ. ಶಭನಮ್ ಕತ್ತಿನ ಭಾಗದಲ್ಲಿ ಗಾಯಗಳಾಗಿವೆ. ಹೀಗಾಗಿ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ.
ಒಟ್ಟಿನಲ್ಲಿ ತಾಯಿಯನ್ನು ಕಳೆದುಕೊಂಡು ಮಕ್ಕಳು ತಬ್ಬಲಿಯಾಗಿದ್ದು, ಮಹಿಳೆಯ ಸಾವಿಗೆ ನ್ಯಾಯ ಬೇಕೆಂದು ಕುಟುಂಬಸ್ಥರು ಆಗ್ರಹಿಸುತ್ತಿದ್ದಾರೆ.