ಹುಬ್ಬಳ್ಳಿ: ಮೋಸದಿಂದ ಜಮೀನು ಬರೆಯಿಸಿಕೊಂಡ ಆರೋಪದ ಹಿನ್ನಲೆ ಮನನೊಂದು ಮಹಿಳೆಯೋರ್ವಳು ಡೆತ್ ನೋಟ್ ಬರೆದಿಟ್ಟು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ಧಾರವಾಡ ಅಳ್ನಾವರ ತಾಲೂಕಿನ ಅರವಟಗಿ ಗ್ರಾಮದ ಶೇಖವ್ವ ಈರಪ್ಪ ಬಳಿಗಾರ(48) ಎಂಬ ಮಹಿಳೆ ಆತ್ಮಹತ್ಯೆಗೆ ಶರಣಾಗಿದ್ದಾಳೆ.

ಎರಡು ಎಕರೆ ಜಮೀನನ್ನು ಎರಡು ಲಕ್ಷ ರೂ. ಗೆ ಉಳುಮೆ ಮಾಡಲು ಶೇಖವ್ವ ನೀಡಿದ್ದಳು ಇದಕ್ಕೆ ಸಂಬಂಧಿಸಿದಂತೆ ಒಪ್ಪಂದ ಪತ್ರ ಮಾಡಿ ಪತ್ರಕ್ಕೆ ಸಹಿ ಮಾಡಿಸಿಕೊಂಡು ಒಪ್ಪಂದ ಪತ್ರ ಎಂದು ಹೇಳಿ ಮಹೇಶ್ ಬುಡರಕಟ್ಟಿ, ಉಮೇಶ್ ಕರಿಕಟ್ಟಿ, ನಾಗರಾಜ್ ತುಂಬಗೇರಿ, ವೀರಣ್ಣ ಹೆಬ್ಬಳ್ಳಿ ಎಂಬುವವರು ಖರೀದಿ ಮಾಡಿಕೊಂಡಿದ್ದಾರೆಂಬ ಆರೋಪ ಕೇಳಿ ಬಂದಿದೆ.
ಜಮೀನನ್ನು ವಂಚನೆ ಮಾಡಿ ಖರೀದಿ ಮಾಡಿದ್ದಾರೆಂದು ಮನನೊಂದು ಮೊಸಮಾಡಿದವರ ಹೆಸರು ಬರೆದಿಟ್ಟು ಜ.30 ರಂದು ಶೇಖವ್ವ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಸಿದ್ದಳು, ಆದರೆ ತೀವ್ರ ಅಸ್ವಸ್ಥಗೊಂಡ ಹಿನ್ನಲೆ ಚಿಕಿತ್ಸೆ ಫಲಿಸದೇ ಕಿಮ್ಸ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾಳೆ.
ಇನ್ನು ನಮ್ಮ ತಾಯಿ ಸಾವಿಗೆ ಕಾರಣರಾದವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಶೇಕವ್ವನ ಮಕ್ಕಳು ಹಾಗೂ ಶೇಕವ್ವನ ಕುಟುಂಬಸ್ಥರು ಆಗ್ರಹಿಸುತ್ತಿದ್ದಾರೆ.
ಈ ಕುರಿತು ಅಳ್ನಾವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ತನಿಖೆ ಮುಂದುವರೆದಿದೆ.