ಧಾರವಾಡ: ಹೊಲಕ್ಕೆ ಬೆಂಕಿ ಹತ್ತಿದನ್ನು ನಂದಿಸಲು ಹೋಗಿ ವ್ಯಕ್ತಿಗೆ ಬೆಂಕಿ ಹತ್ತಿದ ಘಟನೆ ಕಲಘಟಗಿ ತಾಲುಕಿನ ತುಂಬರಿಕೊಪ್ಪ ಗ್ರಾಮದಲ್ಲಿ ನಡೆದಿದೆ.

ಪೌಲು ಚಿನ್ನಪ್ಪ ತುಮುಕನ್ನವರ್ ಗಾಯಗೊಂಡ ವ್ಯಕ್ತಿ. ಎಂದಿನಂತೆ ಹೊಲಕ್ಕೆ ಹೋದ ಸಂದರ್ಭದಲ್ಲಿ ವಿದ್ಯುತನಿಂದ ಬೆಂಕಿ ಹತ್ತಿದ ಪರಿಣಾಮ ಅದನ್ನು ಆರಿಸಲು ಹೋಗಿ ಹೋಗಿ ಪೌಲು ಚಿನ್ನಪ್ಪನಿಗೆ ಬೆಂಕಿ ತಗುಲಿದೆ. ಭಾಗಶಃ 90 ರಷ್ಟು ದೇಹ ಬೆಂಕಿಯಿಂದ ಸುಟ್ಟ ಹೋಗಿದ್ದು, ಆತನನ್ನು ಚಿಕಿತ್ಸೆಗಾಗಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಘಟನೆ ಕಲಘಟಗಿ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.