ಹುಬ್ಬಳ್ಳಿ: ವಾಣಿಜ್ಯ ನಗರಿ, ಛೋಟಾ ಮುಂಬೈ ಎಂದೇ ಖ್ಯಾತಿ ಪಡೆದ ಹುಬ್ಬಳ್ಳಿ -ಧಾರವಾಡ ಅವಳಿನಗರದಲ್ಲಿ ಅದೆಷ್ಟೋ ಅಕ್ರಮ ದಂಧೆಗಳಿಗೆ ಕಡಿವಾಣ ಹಾಕೋ ಉದ್ದೇಶದಿಂದ ಪೊಲೀಸ್ ಇಲಾಖೆ ಅದೆಷ್ಟೋ ಕಾರ್ಯಾಚರಣೆ ಮೂಲಕ ಸಾರ್ವಜನಿಕರಿಗೆ ಜಾಗೃತಿ ಮೂಡಿಸುತ್ತಿದೆ. ಆದ್ರೆ ಅದೇ ಅಕ್ರಮ ದಂಧೆಗಳಿಗೆ ಒಳಗಿಂದೊಳಗೇ ಕುಮ್ಮಕ್ಕು ನೀಡೋ ಕೆಲವು ಇಲಾಖೆಗಳ ಅಧಿಕಾರಿಗಳ ಮುಖವಾಡವನ್ನ ನಿಮ್ಮ ಕರ್ನಾಟಕ ಪಬ್ಲಿಕ್ ವಾಯ್ಸ್ ಇದೀಗ ರಿವೀಲ್ ಮಾಡುತ್ತಿದೆ.
ಇದೊಂದು ಬೇಲಿಯೇ ಎದ್ದು ಹೊಲ ಮೇಯ್ದ ಕಥೆಯನ್ನ ಕರ್ನಾಟಕ ಪಬ್ಲಿಕ್ ವಾಯ್ಸ್ ಸುದ್ದಿ ವಾಹಿನಿ ನಿಮ್ಮ ಮುಂದೆ ಬಿಚ್ಚಿಡುತ್ತಿದೆ. ಎಸ್ ಈಗಾಗ್ಲೇ ಅವಳಿ ನಗರದಾದ್ಯಂತ ನಡೆಯುತ್ತಿರೋ ಅನೇಕ ಅಕ್ರಮಧಂದೆಗಳ ಪೈಕಿ ಇದು ಬಹುದೊಡ್ಡ ದಂಧೆ ಅಂದ್ರೆ ತಪ್ಪಾಗ್ಲಿಲ್ಲ. ಹೌದು ಇದು ದಿನಬಳಕೆ ಗ್ಯಾಸ್ ಸಿಲಿಂಡರ್ ಬಳಸೋರೆಲ್ಲ ನೋಡಲೇಬೇಕಾದ ಸ್ಟೋರಿ. ಜಿಲ್ಲೆಯಲ್ಲಿ ಎಗ್ಗಿಲ್ಲದೇ ನಡೆಯೋ ಅಕ್ರಮ ಗ್ಯಾಸ್ ಸಿಲಿಂಡರ್ ರೀಫಿಲ್ಲಿಂಗ್ ಧಂದೆಯ ಮತ್ತೊಂದು ಅಸಲೀಯತ್ತು ನಿಮ್ಮ ಮುಂದೆ ನಾವು ಬಿಚ್ಚಿಡ್ತೀವಿ ನೋಡಿ.

ದಿನನಿತ್ಯ ಸಾರ್ವಜನಿಕರಿಗೆ ಸರಬರಾಜಾಗುವ ಗೃಹ ಬಳಕೆ ಸಿಲಿಂಡರ್ ಗಳಿಂದ ಅದೆಷ್ಟು ಅಪಾಯ ಎದುರಾಗ್ತಿದೆ ಅನ್ನೋದು ನಾವು ಹೇಳಲು ಹೊರಟಿರೋ ಈ ಸ್ಪೋಟಕ ವರದಿಯಿಂದಲೇ ನಿಮಗೆ ಗೊತ್ತಾಗುತ್ತೆ….ಡೈರೆಕ್ಟಾಗೇ ವಿಷಯಕ್ಕೆ ಬರೋದಾದ್ರೆ ಧಾರವಾಡ ಜಿಲ್ಲೆಯಲ್ಲಿ ಅಕ್ರಮವಾಗಿ ನಡೆಯುತ್ತಿರೋ ಸಿಲಿಂಡರ್ ಕರಾಳ ಧಂದೆಯನ್ನ ಭೇದಿಸೋ ಇಲಾಖೆ ಅದರ ಹಿಂದೆ ಇರುವ ಕಾಣದಕೈಗಳ ರಾಯಭಾರಿಗಳಾರು ಅನ್ನೋದನ್ನ ಪತ್ತೆ ಹಚ್ಚಿದ್ರೆ ಪೊಲೀಸ್ ಇಲಾಖೆಯ ಕಾರ್ಯಾಚರಣೆಗೆ ಮತ್ತಷ್ಟು ಸಾರ್ಥಕ ಎನ್ನಿಸುತ್ತೆ. ಅನೇಕ ಅಕ್ರಮ ಚಟುವಟಿಕೆಗಳನ್ನ ಭೇದಿಸೋ ಪೊಲೀಸ್ ಇಲಾಖೆಗೆ ಧಾರವಾಡ ಜಿಲ್ಲೆಯಲ್ಲೇ ಅದೂ ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯ ಸರಹದ್ದಿನಲ್ಲೇ ನಡೆಯುತ್ತಿರೋ ಗ್ಯಾಸ್ ಸಿಲಿಂಡರ್ ಮಾಫಿಯಾದ ಒಳಮರ್ಮದ ಬಗ್ಗೆ ಗೊತ್ತಿಲ್ಲದೇ ಇರೋದು ಸೋಜಿಗವೆನಿಸುತ್ತೆ. ಅಕ್ರಮ ಸಿಲಿಂಡರ್ ಮಾಫಿಯಾವನ್ನ ಬೇರು ಸಮೇತ ಕಿತ್ತೊಗೆಯಬೇಕಾದ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಈ ಮಾಫಿಯಾವನ್ನೇ ಮಾಫಿ ಮಾಡುತ್ತಿದೆಯ ಅನ್ನೋ ಅನುಮಾನ ಹುಟ್ಟಿಸಿದೆ.

ಬಟ್ “ಹುಬ್ಬಳ್ಳಿ ಗ್ರಾಮೀಣ ಠಾಣೆಯ ದಕ್ಷ ಹಾಗೂ ಪ್ರಾಮಾಣಿಕ ಇನ್ಸ್ಪೆಕ್ಟರ್ ಮುರುಗೇಶ್ ಚನ್ನಣ್ಣನವರ್” ನೇತೃತ್ವದ ತಂಡ ಹಿಂದೆ ಕೂಡ 300 ಕ್ಕೂ ಹೆಚ್ಚು ಗ್ಯಾಸ್ ಸಿಲಿಂಡರ್ ಗಳನ್ನು ವಶಕ್ಕೆ ಪಡೆದು ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಗಮನಕ್ಕೆ ತಂದು ಆರೋಪಿಗಳ ಹೆಡೆಮುರಿ ಕಟ್ಟಿದ್ದು ಇದೆ, ಈಗ ಮತ್ತೆ ಅದೇ ಗ್ಯಾಂಗ್ ಕಾರ್ಯಪ್ರವೃತ್ತಿ ಆಗಿ ಮತ್ತೆ ಗ್ರಾಮೀಣ ಪೊಲೀಸರ ಬಲೆಗೆ ಬಿದ್ದಿದ್ದು, 200 ಕ್ಕೂ ಹೆಚ್ಚು ಸಿಲಿಂಡರ್ ಗಳನ್ನೂ ಸೀಜ್ ಮಾಡಿ ಒಟ್ಟು 11 ಲಕ್ಷಕ್ಕೂ ಹೆಚ್ಚು ವಸ್ತುಗಳನ್ನು ವಶಕ್ಕೆ ಪಡೆದು ಐದು ಜನ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದೆ. ಆದರೆ ಇದರೆ ಹಿಂದೆ ಇರುವ ಕಿಂಗ್ ಪಿನ್ ಗಳ ಕೈ ಬಿಟ್ಟಿದ್ದು ಯಾಕೆ?? ಎಂಬ ಪ್ರಶ್ನೆ ಕೂಡ ಕಾಡುತ್ತಿದೆ.

ಪ್ರತಿಷ್ಠಿತ ಕಂಪನಿಗಳ ಗೃಹ ಬಳಕೆ ಸಿಲಿಂಡರ್ ಗಳಿಂದ ವಾಣಿಜ್ಯ ಬಳಕೆಯ ಸಿಲಿಂಡರ್ ಗಳಿಗೆ ಯಾವುದೇ ಪರವಾನಗಿ ಇಲ್ದೇ ನಗರದ ಹೊರ ವಲಯದಲ್ಲಿ ನಡೆಸುತ್ತಿರೋ ಈ ಅಕ್ರಮ ದಂಧೆಯ ರೂವಾರಿಗಳೇ ಇಲಾಖೆಯ ಅಧಿಕಾರಿಗಳಾಗಿದ್ದಾರೆ ಅನ್ನೋದು ಮತ್ತೊಂದು ದುರದೃಷ್ಟಕರ ಸಂಗತಿ. ಅಕ್ರಮ ಗ್ಯಾಸ್ ರೀಫಿಲ್ಲಿಂಗ್ ಕಿಂಗ್ ಪಿನ್ ” ನಿವೃತ್ತ ಪೊಲೀಸ್ ಅಧಿಕಾರಿಯ ಮಗ ಮುತ್ತು ಹಾಗೂ ಈರಣ್ಣನ” ಅನತಿಯಂತೇ ಇಲಾಖೆಯ ವ್ಯಾಪ್ತಿಯಲ್ಲೇ ದಿನಬೆಳಗಾದ್ರೆ ಎಗ್ಗಿಲ್ಲದೇ ನಡೆಯೋ ಈ ಸಿಲಿಂಡರ್ ಮಾಫಿಯಾಗೆ ಯಾರೆಲ್ಲ ಕೈ ಜೋಡಿಸಿದ್ದಾರೆ. ಆಹಾರ ಇಲಾಖೆಯಿಂದ ಹಿಡಿದು ಹಲವು ಸೋಕಾಲ್ಡ್ ಖಡಕ್ ಅಧಿಕಾರಿಗಳಿಗೆ ಪ್ರತಿನಿತ್ಯ ಈ ಕರಾಳದಂಧೆಯಿಂದ ಅದೆಷ್ಟು ಮಾಮೂಲಿ ಹೋಗುತ್ತೆ ಅನ್ನೋದು ಬಲು ಇಂಟ್ರೆಸ್ಟಿಂಗ್ ಕಹಾನಿ ಮೂಲಕ ನಿಮ್ಮ ಕರ್ನಾಟಕ ಪಬ್ಲಿಕ್ ವಾಯ್ಸ್ ಸುದ್ದಿವಾಹಿನಿ ಆ ಅಧಿಕಾರಿಗಳ ಹಾಗೂ ರೂವಾರಿಗಳ ಮುಖವಾಡವನ್ನ ಸಧ್ಯದಲ್ಲೇ ಅಧೀಕೃತವಾಗಿ ಕಳಚಲಿದೆ.
ಅಲ್ದೇ ಈಗಾಗಲೇ ಈ ಅಕ್ರಮ ಧಂದೆಯ ಕಾರ್ಯಾಚರಣೆ ವೇಳೆ ಅದ್ಯಾರ್ಯಾರ ಬಾಯಿಗೆ ಗರಿಗರಿ ನೋಟುಗಳಿಂದ ಲಾಕ್ ಮಾಡಿದ್ದಾರೆ ಅನ್ನೋ ಇಂಚಿಂಚೂ ಇಂಟ್ರೆಸ್ಟಿಂಗ್ ಕಹಾನಿ ಮೂಲಕ ನಿಮ್ಮ ಕರ್ನಾಟಕ ಪಬ್ಲಿಕ್ ವಾಯ್ಸ್ ಸುದ್ದಿವಾಹಿನಿ ಆ ಅಧಿಕಾರಿಗಳ ಹಾಗೂ ರೂವಾರಿಗಳ ಮತ್ತೊಂದು ಮುಖವನ್ನು ಸಧ್ಯದಲ್ಲೇ ಅಧೀಕೃತವಾಗಿ ಬಿಚ್ಚಿಡಲಿದೆ.
ನಿರಂತರ ಅಪಡೇಟ್ ಗಾಗಿ ವೀಕ್ಷಿಸುತ್ತಿರಿ ಕರ್ನಾಟಕ ಪಬ್ಲಿಕ್ ವಾಯ್ಸ್….