ಹುಬ್ಬಳ್ಳಿ: 18 ವರ್ಷದ ಯುವತಿಯನ್ನ 50 ವರ್ಷ ಅಂಕಲ್ ಮದುವೆಯಾದ ಪ್ರಕರಣಕ್ಕೆ ಇದೀಗ ಬಿಗ್ ಟ್ವಿಸ್ಟ್ ಸಿಕ್ಕಿದೆ. ಹುಡುಗಿಯನ್ನು ಬಲವಂತವಾಗಿ ಮದುವೆಯಾಗಿ, ಮನೆಯಲ್ಲಿ ಕೂಡಿಹಾಕಿ 15 ದಿನ ನರಕ ತೋರಿಸಿದ್ದಾನೆ. ಜನವರಿ ಮೂರರಂದು ಹುಬ್ಬಳ್ಳಿ ಮೂಲದ ಕರಿಷ್ಮಾ ಕಾಣೆಯಾದ ಬಗ್ಗೆ ಮಹಾರಾಷ್ಟದ ಕೊಲ್ಲಾಪುರದಲ್ಲಿ ಪ್ರಕರಣ ದಾಖಲಾಗಿತ್ತು.ಹುಬ್ಬಳ್ಳಿಯ ಚಾಲುಕ್ಯ ನಗರದ ನಿವಾಸಿಯಾಗಿದ್ದ ಕರಿಷ್ಮಾ ಅಜ್ಜಿ ಮನೆ ಹೋದಾಗ ನಾಪತ್ತೆಯಾಗಿದ್ದಳು. ಇದೀಗ ಈ ಯುವತಿ ಹಾಗೂ ಅಂಕಲ್ ಲವ್ ಕಹಾನಿಗೆ ಬಿಗ್ ಟ್ವಿಸ್ಟ್ ಸಿಕ್ಕಿದೆ.

ಈಗಾಗಲೇ ಈ ಪೋಲಿ ಅಂಕಲ್ ಪ್ರಕಾಶ್ ಗೆ 22 ವರ್ಷದ ಮಗನಿದ್ದಾನೆ. ಸದ್ಯ ಇರುವ ಹೆಂಡತಿಯನ್ನು ಸಹ ಪ್ರೀತಿಸಿ ಮದುವೆಯಾಗಿದ್ದ ಹೆಂಡತಿಗೂ ಮಾನಸಿಕ ಕಿರಿಕಿರಿ ನೀಡ್ತಿದ್ದನಂತೆ. ಕಾಮಪಿಶಾಚಿಯಾಗಿರುವ ಈತ ನಿತ್ಯ ತನ್ನ ಹೆಂಡತಿಗೂ ದೈಹಿಕ ಹಲ್ಲೆ ಮಾಡುತ್ತಿದ್ದನಂತೆ.ಇದೇ ವೇಳೆ ಅದೇ ಏರಿಯಾದ ಕರಿಷ್ಮಾ ಮೇಲೆ ಕಣ್ಣು ಹಾಕಿ,ಆಕೆಯ ಬಡತನವನ್ನೇ ಬಂಡವಾಳವಾಗಿ ಬಳಸಿಕೊಂಡು ಹಣದ ಆಮೀಷ ತೋರಿಸಿ ಬಲೆಗೆ ಹಾಕಿಕೊಂಡಿದ್ದ ಈ ಭೂಪನ ಬಣ್ಣ ಬಣ್ಣದ ಮಾತಿಗೆ ಮರಳಾಗಿ ಮದುವೆಯಾಗಲು ಒಪ್ಪಿದ್ದಳು.

ಆದ್ರೆ ಅಂಕಲ್ ಜೊತೆಗೆ ಓಡಿಹೋಗಿ ಮದುವೆ ಆದ ಎರಡೇ ದಿನಕ್ಕೆ ಕರೀಷ್ಮಾ ಮೇಲೆ ಟಾರ್ಚರ್ ನೀಡಲು ಮುಂದಾಗಿದ್ದಾನೆ. ಒಂಟಿ ಮನೆಯಲ್ಲಿ ಕೂಡಿಹಾಕಿ ಬೀಗ ಹಾಕಿಕೊಂಡು ಹೋಗ್ತಿದ್ದನಂತೆ. ಅಲ್ಲದೇ ನಿತ್ಯ ಅಸಭ್ಯ ವಿಡಿಯೋ ಚಿತ್ರಗಳನ್ನು ತೋರಿಸಿ ಕರಿಷ್ಮಾ ಮೇಲೆ ರಾಕ್ಷಸ ವರ್ತನೆ ತೋರಿದ್ದಾನೆ. ಇದರಿಂದಾಗಿ ಭಯಗೊಂಡ ಕರಿಷ್ಮಾ, ಪ್ರಕಾಶ್ ನಿಂದ ತಪ್ಪಿಸಿಕೊಂಡು ಬಂದು ಹೊಸ ಜೀವನ ಆರಂಭಿಸುವ ಆಲೋಚನೆಯಲ್ಲಿದ್ದಾಳೆ. ಆದರೆ ಪ್ರಕಾಶ್ ಕರಿಷ್ಮಾ ಮತ್ತು ತನ್ನ ಹೆಂಡತಿ ಸೆರಿ ಐದು ಜನ ಹುಡುಗಿಯರಿಗೆ ಇದೆ ರೀತಿ ಮಾಡಿರುವ ಆರೋಪ ಕೇಳಿ ಬಂದಿದೆ. ಹೀಗಾಗಿ ಪ್ರಕಾಶ್ ಒಬ್ಬ ಕಾಮಪಿಶಾಚಿಯಾಗಿದ್ದು ಪ್ರಕಾಶ್ ವಿರುದ್ಧ ಕಾನೂನು ಹೋರಾಟಕ್ಕೆ ನಿರ್ಧಾರ ಮಾಡಿದ್ದಾಳೆ.
ಒಟ್ಟಿನಲ್ಲಿ ವಯಸ್ಸಿಗೂ ಮೀರಿದ ಅಂಕಲ್ ಜೊತೆ ಓಡಿಹೋಗಿ ಪರಾರಿಯಾಗಿದ್ದ ಈ ಯುವತಿ ಇದೀಗ ಅದೇ ಅಂಕಲ್ ನಿಂದ ನರಕಯಾತನೆ ಅನುಭವಿಸಿದ್ದಾಳೆ. ಉತ್ತಮ ಭವಿಷ್ಯ ಕಂಡುಕೊಳ್ಳಬೇಕಿದ್ದ ಯುವತಿ ಕರೀಷ್ಮಾ ಜೀವನದ ಆರಂಭದಲ್ಲೇ ತನ್ನ ಬದುಕನ್ನ ಹಾಳು ಮಾಡಿಕೊಳ್ಳುತ್ತಿರೋದು ನಿಜಕ್ಕೂ ವಿಪರ್ಯಾಸವೇ ಸರಿ. ಇನ್ನಾದ್ರೂ ಈ ಯುವತಿ ತನ್ನ ಬದುಕು ಹಸನು ಮಾಡಿಕೊಂಡು ಉತ್ತಮಭವಿಷ್ಯ ಕಂಡುಕೊಳ್ಳಲಿ ಅನ್ನೋದು ಎಲ್ಲರ ಆಶಯ.