ಹುಬ್ಬಳ್ಳಿ; ಸಾಲಗಾರರ ಬಡ್ಡಿ ಕಿರುಕುಳ ತಾಳಲಾರದೇ ಡೆತ್ ನೋಟ್ ಬರೆದಿಟ್ಟು ವ್ಯಕ್ತಿಯೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಫೈನಾನ್ಸ್ ನೀಡಿದ ವ್ಯಕ್ತಿಯನ್ನು ಬಂಧಿಸುವಲ್ಲಿ ವಿದ್ಯಾನಗರ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.

ನಿನ್ನೆ ಉಣಕಲ್ ಕರೆಯಲ್ಲಿ ಕುಂದಗೋಳ ತಾಲೂಕಿನ ಶಿವಾನಂದ ಕಳ್ಳಿಮನಿ (36) ಎಂಬ ವ್ಯಕ್ತಿ ಶವ ಪತ್ತೆಯಾಗಿತ್ತು. ಶಿವಾನಂದ ನಗರದ ಗಂಗಾಧರನಗರದ ನಿವಾಸಿ ಕಾರ್ತಿಕ ಬಳ್ಳಾರಿ ಎಂಬ ವ್ಯಕ್ತಿಯ ಬಳಿ ನಾಲ್ಕು ಲಕ್ಷ ಹಣ ಪಡೆದು ಅದಕ್ಕೆ ಬದಲಾಗಿ ನಾಲ್ಕು ಲಕ್ಷ ಬಡ್ಡಿ ನೀಡಿದ್ದ ಆದರೂ ಕೂಡಾ ಅಸಲು ಬಾಕಿ ಇದೆ ಅಂತ ಮೃತ ಶಿವಾನಂದಗೆ ಕಿರುಕುಳ ನೀಡುತ್ತಿದ್ದಂತೆ, ಇದೆ ಕಾರಣಕ್ಕೆ ಶಿವಾನಂದ ಮನನೊಂದು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಫೆ.12 ರಂದು ಮನೆ ಬಿಟ್ಟು ಶಿವಾನಂದ ಹೋಗಿದ್ದ ಕುಟುಂಬದವರು ಫೆ.14 ರಂದು ಕುಂದಗೋಳ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು. ಪೊಲೀಸರು ತನಿಖೆ ಕೈಗೊಂಡಾಗ ಹಾವೇರಿಯ ಗುತ್ತಲದಲ್ಲಿ ಅವರ ಬೈಕ್ ಹಾಗೂ ಡೆತ್ ನೋಟ್ ಪತ್ತೆಯಾಗಿದೆ. ನನ್ನ ಈ ಪರಿಸ್ಥಿತಿಗೆ ಕಾರ್ತಿಕ ಬಳ್ಳಾರಿ ಕಾರಣ ಅವನಿಂದ ನಾಲ್ಕು ಲಕ್ಷ ಹಣ ಪಡೆದಿದ್ದು, ಬಡ್ಡಿ ಸಮೇತ ಮರಳಿಸಿದ್ದರೂ ಕೂಡಾ ಮತ್ತೆ ಹಣ ನೀಡುವಂತೆ ಕಿರುಕುಳ ನೀಡುತ್ತಿದ್ದ ಎಂದು ಡೆತ್ ನೋಟ್ ನಲ್ಲಿ ಉಲ್ಲೇಖಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಈ ಕುರಿತು ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿ ಕಾರ್ತಿಕ್ ಬಳ್ಳಾರಿ ನನ್ನು ಬಂಧನ ಮಾಡಿ ಮುಂದಿನ ತನಿಖೆ ಕೈಗೊಂಡಿದ್ದಾರೆ.