ಹುಬ್ಬಳ್ಳಿ: ನಗರದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರ ಗ್ಯಾಂಗ್, ಕ್ಷುಲಕ ವಿಚಾರಕ್ಕೆ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿರುವ ಘಟನೆ ತಡ ರಾತ್ರಿ ಹುಬ್ಬಳ್ಳಿಯ ಎಸ್ ಎಂ ಕೃಷ್ಣ ನಗರದ ವಾಟರ್ ಟ್ಯಾಂಕ್ ಬಳಿ ನಡೆದಿದೆ.

ಮಲ್ಲಿಕ್ ಬೈರಿಕೊಪ್ಪ ಅನ್ನೋ ಯುವಕನ ಮೇಲೆ ತೌಸೀಫ್ ಹಾಗೂ ತಾಜ್ ಸೇರಿ ಐದು ಜನರ ಪುಂಡರ ಗ್ಯಾಂಗ್ ನಿಂದ ಹಲ್ಲೆ ಮಾಡಲಾಗಿದೆ ಎಂದು ಹಲ್ಲೆಗೆ ಒಳಗಾದ ಯುವಕ ಹೇಳಿದ್ದಾನೆ, ವಿನಾಕಾರಣ ನನ್ನ ಮೇಲೆ ಹಲ್ಲೆ ಮಾಡಲಾಗಿದೆ, ಹಿಂದೆ ಕೂಡ ಎರೆಡು ಬಾರಿ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ, ಇದಕ್ಕೆ ಬೇಸತ್ತು ಹೋಗಿದ್ದೇನೆ, ಪೋಲಿಸ ಕಂಪ್ಲೇಂಟ್ ನೀಡಿದರೆ ಜೀವ ಬೆದರಿಕೆ ಹಾಕಿದ್ದಾರೆ, ನನಗೆ ನ್ಯಾಯ ಬೇಕೆಂದು ಹಲ್ಲೆಗೆ ಒಳಗಾದ ಯುವಕ ತನ್ನ ಅಳಲನ್ನು ತೋಡಿಕೊಂಡಿದ್ದಾನೆ. ಸದ್ಯ ಹಲ್ಲೆಗೆ ಒಳಗಾದ ಯುವಕನನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಈ ಘಟನೆ ಕುರಿತು ಕಸಬಾಪೇಟ್ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಒಟ್ಟಿನಲ್ಲಿ ಹುಬ್ಬಳ್ಳಿ ಧಾರವಾಡ ಪೋಲಿಸ್ ಕಮಿಷನರೇಟ್ ದಿನ ನಿತ್ಯ ಏರಿಯಾ ಡಾಮಿನೇಷನ್, ಫೂಟ್ ಪೆಟ್ರೋಲಿಂಗ್, ಸಾರ್ವಜನಿಕ ಸಭೆಗಳನ್ನು ನಡೆಸಿ ಜಾಗೃತಿಗಳನ್ನು ಮೂಡಿಸಿದರೂ ಕೂಡ ಅಪರಾಧ ಪ್ರಕರಣಗಳು ಮಾತ್ರ ಕಡಿಮೆ ಆಗುತ್ತಿಲ್ಲ ಅನ್ನೋದು ಪೊಲೀಸರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.