ಚಲಿಸುತ್ತಿದ್ದ ಕೆಎಸ್ಆರ್ಟಿಸಿ ಬಸ್ ನಲ್ಲಿಯೇ ವ್ಯಕ್ತಿಯೋರ್ವನನ್ನು ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಕಾರವಾರ ಜಿಲ್ಲೆಯ ಶಿರಸಿ ತಾಲೂಕಿನಲ್ಲಿ ಶನಿವಾರ ರಾತ್ರಿ ನಡೆದಿದೆ.
ಸಾಗರ ತಾಲೂಕು ಗಂಗಾಧರ ಮಂಜುನಾಥ ವಸಂತೆ(35) ಮೃತಪಟ್ಟ ವ್ಯಕ್ತಿ. ಪ್ರೀತಮ್ ಡಿಸೋಜಾ ಕೊಲೆ ಮಾಡಿದ ಆರೋಪಿಯಾಗಿದ್ದಾನೆ. ಕೊಲೆ ಮಾಡಿದ ಬಳಿಕ ಚಲಿಸುತ್ತಿದ್ದ ಬಸ್ ನಿಂದ ಇಳಿದು ಆರೋಪಿ ಪರಾರಿಯಾಗಿದ್ದಾನೆ.

ಅಂಕೋಲಾದಿಂದ ಶಿರಸಿ ಮಾರ್ಗವಾಗಿ ಬೆಂಗಳೂರಿಗೆ ತೆರಳುತ್ತಿದ್ದ ಬಸ್ ನಲ್ಲಿ ಗಂಗಾಧರ ಪತ್ನಿ ಪೂಜಾ ಜೊತೆಗೆ ಪ್ರಯಾಣಿಸುತ್ತಿದ್ದ. ಆರೋಪಿ ಪ್ರೀತಮ್ ಡಿಸೋಜಾ ಕೂಡ ಅದೇ ಬಸ್ ನಲ್ಲಿದ್ದ. ಶಿರಸಿಯ ಹೊಸ ಬಸ್ ನಿಲ್ದಾಣದಿಂದ ಕೇಂದ್ರೀಯ ಬಸ್ ನಿಲ್ದಾಣಕ್ಕೆ ಬಸ್ ತೆರಳುವಾಗ ಗಂಗಾಧರನ ಜೊತೆಗೆ ಜಗಳವಾಡಿ ಎದೆಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಬಸ್ ಚಾಲಕ ಆಸ್ಪತ್ರೆಗೆ ಕರೆದೊಯ್ದರೂ ಗಂಗಾಧರನನ್ನು ಉಳಿಸಲು ಸಾಧ್ಯವಾಗಿಲ್ಲ.
ಕೊಲೆಗೆ ಕಾರಣವೇನು…??
ಪ್ರೀತಮ್ ಡಿಸೋಜಾ ಕಳೆದ ಹತ್ತು ವರ್ಷಗಳಿಂದ ಶಿರಸಿಯ ಪೂಜಾ ಎಂಬಾಕೆಯನ್ನು ಪ್ರೀತಿಸುತ್ತಿದ್ದ. ಅವಳೂ ಅವನನ್ನು ಪ್ರೀತಿಸುತ್ತಿದ್ದಳಂತೆ. ಆದರೆ, ಕೆಲಸದ ನಿಮಿತ್ತ ಬೆಂಗಳೂರಿಗೆ ಹೋಗಿದ್ದ ಪೂಜಾ ನಾಲ್ಕು ತಿಂಗಳ ಹಿಂದೆ ಅಲ್ಲಿ ಪರಿಚಯವಾದ ಸಾಗರ ನಿವಾಸಿ ಗಂಗಾಧರ್ ಎಂಬಾತನನ್ನು ಮದುವೆಯಾಗಿದ್ದಳು.
ಮದುವೆಯಾದ ಹೆಂಡತಿ ಪೂಜಾ ಸಂಬಂಧಿಕರ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಬಂದಿದ್ದ ಗಂಗಾಧರ್ ಶನಿವಾರ ರಾತ್ರಿ ಬಸ್ ನಿಲ್ದಾಣದಿಂದ ಕೆಎಸ್ಆರ್ಟಿಸಿ ಬಸ್ನಲ್ಲಿ ಬೆಂಗಳೂರಿಗೆ ತೆರಳಿದ್ದರು. ತನ್ನ ಹಳೆಯ ಪ್ರೇಯಸಿ ಬಂದಿರುವ ವಿಷಯ ತಿಳಿದು ಪ್ರೀತಮ್ ಕೂಡ ಅದೇ ಬಸ್ ಹತ್ತಿದಾನೆ.

ನಂತರ ಬಸ್ಸಿನಲ್ಲಿ ಪ್ರಯಾಣ ಮಾಡುತಿದ್ದ ಗಂಗಾಧರ್ ಜೊತೆ ಜಗಳವಾಡಿ ಹೃದಯಕ್ಕೆ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾನೆ.
ಸದ್ಯ ಪೊಲೀಸರು ಆರೋಪಿ ಪ್ರೀತಮ್ ಡಿಸೋಜಾನನ್ನು ವಶಕ್ಕೆ ಪಡೆದಿದ್ದು ಜೊತೆಗೆ ಸಾವನ್ನಪ್ಪಿದ ಗಂಗಾಧರ್ ಪತ್ನಿ ಪೂಜಾಳನ್ನು ಕೂಡ ವಿಚಾರಣೆ ಒಳಪಡಿಸಿದ್ದಾರೆ.