ಹುಬ್ಬಳ್ಳಿ: ಹಿಂದೂಗಳ ಬಗ್ಗೆ ಅವಹೇಳನ ಪ್ರಕರಣಕ್ಕೇ ಸಂಬಂಧಿಸಿದಂತೆ ಪ್ರಕರಣದ ಪ್ರಮುಖ ಆರೋಪಿ ಬೈತುಲ್ಲಾ ಕಿಲ್ಲೇದಾರಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ ಮೂರನೆಯ ಹೆಚ್ಚುವರಿ ನ್ಯಾಯಾಲಯ.
ಬೈತುಲ್ಲಾಳನ್ನ ನ್ಯಾಯಾಲಯದಿಂದ ನ್ಯಾಯಾಂಗ ಬಂಧನಕ್ಕೆ ಕರೆದೊಯ್ದ ಕಸಬಾಪೇಟ್ ಠಾಣೆಯ ಪೊಲೀಸರು.ಈ ವೇಳೆ ಮಾದ್ಯಮಗಳಿಗೆ ಹೇಳಿಕೆ ನೀಡಿದ ಆರೋಪಿ ಬೈತುಲ್ಲಾ ಕಿಲ್ಲೇದಾರ ನನ್ನನು ಬಲಿಪಶು ಮಾಡಲಾಗಿದೆ, ಈ ಪ್ರಕರಣದಲ್ಲಿ ಬಹಳಷ್ಟು ಜನರ ಕೈವಾಡವಿದೆಯೆಂದ ಬೈತುಲ್ಲಾ ಕಿಲ್ಲೇದಾರ.
ಸದ್ಯ ಆರೋಪಿಯನ್ನು ಧಾರವಾಡ ಕೇಂದ್ರ ಕಾರಾಗೃಹಕ್ಕೆ ಕರೆದೊಯ್ಯಲಾಯಿತು.