ಹುಬ್ಬಳ್ಳಿ: ಹೂ ಬಳ್ಳಿ ಎಂದೇ ಖ್ಯಾತಿ ಪಡೆದಿರುವ ಹುಬ್ಬಳ್ಳಿಯಲ್ಲಿ ಪುಟ್ಟ ಹೂ ಬಳ್ಳಿಯಂತೆ ಇರುವ ಚಿಕ್ಕ ಮಕ್ಕಳ ಮೇಲೆ ದುಂಬಿಯಾಗಿ ಕಾಡುತ್ತಿರುವ ಕಾಮುಕರ ಅಟ್ಟಹಾಸ ಹೆಚ್ಚಾಗುತ್ತಿರೋದು ಅವಳಿ ನಗರ ಜನತೆಯನ್ನ ಬೆಚ್ಚಿ ಬೀಳಿಸುವಂತೆ ಮಾಡಿದೆ.
ಹೀಗೊಂದು ಘಟನೆ ನಗರದ ಹಳೇ ಹುಬ್ಬಳ್ಳಿ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಐದು ವರ್ಷದ ಬಾಲಕನ ಮೇಲೆ ಕಾಮುಕನೋರ್ವ ವಿಕೃತವಾಗಿ ತನ್ನ ಕಾಮಚೇಷ್ಟೆ ಮೆರೆದಿರುವರ ಘಟನೆ ನಡೆದಿದೆ.ಒಂದೇ ಏರಿಯಾದಲ್ಲಿ ವಾಸವಿರುವ 58 ವರ್ಷದ ಸಿರಾಜ್ ಸೌದಾಗರ್ ಎಂಬ ಕಾಮಪಿಶಾಚಿ ಐದು ವರ್ಷದ ಬಾಲಕನಿಗೆ ಜ್ಯೂಸ್ ಕೊಡಿಸುವುದಾಗಿ ಪುಸಲಾಯಿಸಿ, ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಬಾಲಕನ ಜೊತೆ ಅಸಭ್ಯ ವರ್ತನೆ ಮಾಡಿದ್ದಾನೆ.

ಈ ವಿಷಯ ತಿಳಿದು ಅಪ್ರಾಪ್ತ ಬಾಲಕನ ಪೋಷಕರು ಹಳೇ ಹುಬ್ಬಳ್ಳಿ ಪೋಲಿಸ್ ಠಾಣೆಗೆ ದೂರು ನೀಡಿದ್ದು, ಪಾಪಿ ಕಾಮುಕನ ಮೇಲೆ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಹಳೇ ಹುಬ್ಬಳ್ಳಿ ಪೋಲಿಸ್ ಇನ್ಸ್ಪೆಕ್ಟರ್ ಎಂ.ಎನ್ ಸಿಂಧೂರ್ ಮಾರ್ಗದರರ್ಶನದಲ್ಲಿ ಪಿಎಸ್ಐ ಬಿ. ಸಾತಣ್ಣವರ, ಎಎಸ್ಐ ಪರಶುರಾಮ್ ಕಾಳೆ ಹಾಗೂ ಕ್ರೈಂ ಸಿಬ್ಬಂದಿ ನಾಗರಾಜ್ ಕೆಂಚ್ಚಣ್ಣವರ್ ತಂಡ ಕೃತ್ಯ ನಡೆಸಿ ಹಾನಗಲ್ ಜಾತ್ರೆಯಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಕೆಲವೇ ಗಂಟೆಗಳಲ್ಲಿ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಒಟ್ಟಿನಲ್ಲಿ ಸಜ್ಜನ ಸಮಾಜದಲ್ಲಿ ಇಂತಹ ಕಾಮಪಿಶಾಚಿಗಳು ಚಿಕ್ಕಮಕ್ಕಳ ಮೇಲೆ ರಾಕ್ಷಸರಂತೆ ಎರಗುತ್ತಿರುವ ಘಟನೆಗಳು ಮರುಕಳಿಸುತ್ತಲೇ ಇವೆ. ಇನ್ನಾದ್ರೂ ಮಕ್ಕಳ ಪೋಷಕರು ಎಚ್ಚೆತ್ತುಕೊಳ್ಳುವುದು ಅವಶ್ಯಕವಿದೆ.