ಹುಬ್ಬಳ್ಳಿ: ರಂಜಾನ್ ಹಬ್ಬದ ಹಿನ್ನಲೆಯಲ್ಲಿ ನಗರದ ಮಾರುಕಟ್ಟೆಗೆ ಆಗಮಿಸಿದ್ದ ಚಡಚಣ ಮೂಲದ ವ್ಯಕ್ತಿಯೋರ್ವರು ಲಕ್ಷಾಂತರ ರೂ. ಬೆಲೆ ಬಾಳುವ ಮೊಬೈಲ್ ಕಳೆದುಕೊಂಡಿದ್ದು, ದೂರಿನ ಅನ್ವಯವಾಗಿ ಹುಬ್ಬಳ್ಳಿ ಶಹರ ಠಾಣೆಯ ಪೊಲೀಸರು ಕಳೆದುಹೋಗಿದ್ದ ಮೊಬೈಲನ್ನು ಮರಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸಂಜು ಇಂಗೋಲೆ ಎಂಬಾತರು 1 ಲಕ್ಷ 24 ಸಾವಿರ ರೂ. ಬೆಲೆ ಬಾಳುವ ಸ್ಯಾಮ್‌ಸಂಗ್ ಕಂಪನಿಯ ಮೊಬೈಲ್ ಫೋನ್ ಕಳೆದುಕೊಂಡಿದ್ದರು, ಶಹರ ಠಾಣೆಗೆ ಬಂದು ದೂರು ನೀಡಿದ ಮೇರೆಗೆ ಪಿಎಸ್ಐ ವಿನೋದ, ಎಎಸ್ಐ ಎಸ್.ಎಸ್.ಇನಾಮತಿ ಮತ್ತು ಅಪರಾಧ ಸಿಬ್ಬಂದಿಗಳಾದ ಸುರೇಶ್ ಮೆಚ್ಚಿನವರ, ಸುಧಾಕರ ನೇಸೂರ ಅವರು ಕಳೆದುಕೊಂಡ ಮೊಬೈಲ್ ನ್ನು ವಾರಸುದಾರರಿಗೆ ಒಪ್ಪಿಸಿದ್ದಾರೆ.
ಪೊಲೀಸ್ ಸಿಬ್ಬಂದಿಗಳ ಕಾರ್ಯಕ್ಕೆ ಹುಧಾ ಪೊಲೀಸ್ ಕಮೀಷನರೇಟ್ ಹಾಗೂ ಸಾರ್ವಜನಿಕರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.